• ಧಾರವಾಡ ಕೃಷಿ ವಿವಿ ನೇಮಕ
  • ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ
  • KPTCL ನಿಂದ 2975 ಹುದ್ದೆ ನೇಮಕ
  • kannada News
  • general knowledge
  • knowledge bank
  • Dr Apj Abdul Kalam Death Anniversary Know His Life His Legacy And His Inspiration

Abdul Kalam: ಇಂದು ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ..'ಮಿಸೈಲ್‌ ಮ್ಯಾನ್‌' ಕುರಿತು ಇಲ್ಲಿವೆ ಕುತೂಹಲಕಾರಿ ಸಂಗತಿಗಳು..

ಅಬ್ದುಲ್‌ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ರಾಷ್ಟ್ರಪತಿಯಾಗಿ ಜನಮನ ಗೆದ್ದಿದ್ದ ಅಬ್ದುಲ್ ಕಲಾಂ ಅವರನ್ನು "ಮಿಸೈಲ್‌ ಮ್ಯಾನ್‌" ಎಂದೇ ಪ್ರಖ್ಯಾತರಾಗಿದ್ದರು..

dr apj abdul kalam death anniversary know his life his legacy and his inspiration

ಅಬ್ದುಲ್ ಕಲಾಂ ಅವರ ಬಾಲ್ಯ ಮತ್ತು ಶಿಕ್ಷಣ

ಅಬ್ದುಲ್ ಕಲಾಂ ಅವರ  ಬಾಲ್ಯ ಮತ್ತು ಶಿಕ್ಷಣ

ಡಾ. ಎ.ಪಿ.ಜಿ ಅಬ್ದುಲ್ ಕಲಾಂ ಅವರು, ಅಕ್ಟೋಬರ್‌ 15,1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು, ಅವುಲ್ ಫಕೀರ್ ಜೈನಯಲಾಬ್ದೀನ್ ಅಬ್ದುಲ್ ಕಲಾಂ. ಇವರ ತಂದೆಯ ಹೆಸರು ಜೈನುಲಬ್ದೀನ್‌, ತಾಯಿ ಆಶೀಮಾ. ತಂದೆ ದೋಣಿಯ ಚಲಾಯಿಸುವ ವೃತ್ತಿ ಮಾಡುತ್ತಿದ್ದರೇ, ತಾಯಿ ಗೃಹಣಿ. ಇವರಿಗೆ ಐದು ಮಂದಿ ಸಹೋದರರು. ಅದರಲ್ಲಿ ಅಬ್ದುಲ್‌ ಕಲಾಂ ಅವರೇ ಚಿಕ್ಕವರು.

ಅಬ್ದುಲ್‌ ಕಲಾಂ ಅವರ ವಿದ್ಯಾರ್ಥಿ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ಕೂಡಿತ್ತು. ಆರಂಭಿಕ ದಿನಗಳಲ್ಲಿ ಅವರು ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ಮಾರಟ ಮಾಡುತ್ತಿದ್ದರು. ಅಬ್ದುಲ್‌ ಕಲಾಂ ಅವರ ಬದ್ಧತೆ ಮತ್ತು ಶಿಕ್ಷಣದ ಮೇಲಿನ ಪ್ರೀತಿ ಈ ಎಲ್ಲಾ ಕಷ್ಟಗಳನ್ನು ಎದುರಿಸಿ, ಮುಂದೇ ವಿಜ್ಞಾನಿಯಾಗಿ, ಭಾರತದ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಈ ಮೂಲಕ ಯುವ ಪೀಳಿಗೆಗೆ ಸ್ಪೋರ್ತಿ ಮತ್ತು ರೋಲ್‌ ಮಾಡೆಲ್‌ ಆಗಿ ಉಳಿದಿದ್ದಾರೆ. ಅಬ್ದುಲ್‌ ಕಲಾಂ ಅವರು ಶ್ವಾರ್ಟ್ಜ್ ಮೆಟ್ರಿಕ್ಯುಲೇನ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, ನಂತರ ತಿರುಚಿರಾಪಳ್ಳಿಯಲ್ಲಿ ಸೇಂಟ್‌ ಜೋಸೆಫ್ಸ್‌ ಕಾಲೇಜಿಗೆ ಸೇರಿಕೊಂಡರು. ಅಲ್ಲಿಂದ ನಂತರ 1954 ರಲ್ಲಿ ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ಭತಶಾಸ್ತ್ರ ಪದವಿಯನ್ನು ಪಡೆದುಕೊಂಡರು. ನಂತರ ಮದ್ರಾಸ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್‌ಗೆ ತೆರಳಿದರು. Nelson Mandela Day: ಇಂದು ನೆಲ್ಸನ್ ಮಂಡೇಲಾ ದಿನ..ಈ ದಿನದ ಇತಿಹಾಸ, ಆಚರೆಣೆ ಕುರಿತು ಇಲ್ಲಿದೆ ಮಾಹಿತಿ..

ಅಬ್ದುಲ್‌ ಕಲಾಂ ಅವರ ಮಹತ್ವದ ಸಾಧನೆಗಳು

ಅಬ್ದುಲ್‌ ಕಲಾಂ ಅವರ ಮಹತ್ವದ ಸಾಧನೆಗಳು

  • ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರು ಭಾರತದ ಎರಡು ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ರಕ್ಷಾಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೇತೃತ್ವ ವಹಿಸಿದ್ದರು.
  • ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು(ಎಸ್‌ಎಲ್‌ವಿ) ಅಭಿವೃದ್ಧಿ ಪಡಿಸುವ ಯೋಜನೆಗೆ ಡಾ. ಕಲಾಂ ಅವರು ಇಸ್ರೋದಲ್ಲಿ ಸ್ತಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು.
  • ಜುಲೈ 1980 ರಲ್ಲಿ ಡಾ. ಅಬ್ದುಲ್ ಕಲಾಮ ಅವರ ಮಾರ್ಗದರ್ಶನದಲ್ಲಿ ಭಾರತದ ಎಸ್‌ಎಲ್‌ವಿ-3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್‌ನ ಸದಸ್ಯರನ್ನಾಗಿ ಮಾಡಿದರು.
  • ಡಾ. ಎಪಿಜಿ ಅಬ್ದುಲ್‌ ಕಲಾಂ ಅವರು ಪ್ರೋಖ್ರಾನ್‌ನಲ್ಲಿ ಅನೇಕ ಪರಮಾಣು ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ಅಂದಿನ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರರಾಗಿ, ಪ್ರೋಖ್ರಾನ್-II ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸಿದ್ದರು. World Population Day 2023: ವಿಶ್ವ ಜನಸಂಖ್ಯಾ ದಿನ..2027ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತವೇ ನಂಬರ್ 1..

ರಾಷ್ಟ್ರಪತಿಯಾಗಿ ಅಬ್ದುಲ್‌ ಕಲಾಂ

ರಾಷ್ಟ್ರಪತಿಯಾಗಿ ಅಬ್ದುಲ್‌ ಕಲಾಂ

ಅಬ್ದುಲ್‌ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 2002ರ ರಾಷ್ಟ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್‌ ವಿರುದ್ಧ 1,07,366 ಮತಗಳ ಅಂತರದಿಂದ ಗೆದ್ದಿದ್ದರು. ಜುಲೈ 25 2002 ರಿಂದ ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಸರಳತೆ, ಪ್ರಾಮಾಣಿಕತೆ, ಮೇಧಾವಿತನದಿಂದ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು.

ಲೇಖಕರಾಗಿದ್ದ ಡಾ.ಅಬ್ದುಲ್ ಕಲಾಂ

ಲೇಖಕರಾಗಿದ್ದ ಡಾ.ಅಬ್ದುಲ್ ಕಲಾಂ

ರಾಷ್ಟ್ರಪತಿ ಹುದ್ದೆಯ ನಂತರವೂ ಜನಪ್ರಿಯ ವ್ಯಕ್ತಿಯಾಗಿ, ವಿಜ್ಞಾನಿಯಾಗಿ ಡಾ.ಕಲಾಂ ಗುರುತಿಸಿಕೊಂಡಿದ್ದರು. ಅಬ್ದುಲ್‌ ಕಲಾಂ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. "ವಿಂಗ್ಸ್‌ ಆಫ್‌ ಫೈರ್" ಎಂಬುದು ಇವರ ಆತ್ಮಕಥೆಯಾಗಿದೆ. ಇವರು ಇಂಡಿಯಾ ಮೈ ಡ್ರೀಮ್, ಇಂಡಿಯಾ 2020, ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇ‍ಗಳನ್ನು ಹಾಕಿಕೊಟ್ಟಿದ್ದಾರೆ. ಮೈ ಜರ್ನಿ, ಟಾರ್ಗೆಟ್‌ ತ್ರಿ ಬಿಲಿಯನ್‌ ಇವು ಅವರ ಪ್ರಸಿದ್ದ ಪುಸ್ತಕಗಳಾಗಿವೆ.

Kargil Vijay Diwas 2023: ಕಾರ್ಗಿಲ್ ವಿಜಯ ದಿನ..ಭಾರತೀಯರು ಎಂದು ಮರೆಯದ ಈ ದಿನದ ಇತಿಹಾಸ ಇಲ್ಲಿದೆ..

ಪ್ರಶಸ್ತಿಗಳು

ಪ್ರಶಸ್ತಿಗಳು

ಡಾ. ಎಪಿಜಿ ಅಬ್ದುಲ್‌ ಕಲಾಂ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲೆದು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ದೇಶದ ಐಕ್ಯತೆಯ ಇಂದಿರಾ ಗಾಂಧಿ ಪ್ರಶಸ್ರಿ, ರಾಮಾನುಜನ್ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. 1997 ರಲ್ಲಿ ಅಬ್ದಿಲ್ ಕಲಾಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಲ್ಲದೇ 1990ರಲ್ಲಿ ಪದ್ಮ ವಿಭೂಷಣ ಹಾಗೂ 1981 ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.

ಜುಲೈ 27 ರಂದು ಉಪನ್ಯಾಸ ನೀಡುತ್ತಲೇ ನಿಧನ

ಜುಲೈ 27 ರಂದು ಉಪನ್ಯಾಸ ನೀಡುತ್ತಲೇ ನಿಧನ

ಡಾ. ಎಪಿಜಿ ಅಬ್ದುಲ್‌ ಕಲಾಂ ಅವರು ಉಪನ್ಯಾಸ ನೀಡುತ್ತಲೇ ನಿಧನ ಹೊಂದಿದರು. ಜುಲೈ 27,2015 ರಲ್ಲಿ ಶಿಲ್ಲಾಂಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಉಪನ್ಯಾಸ್ ನೀಡುತ್ತಿರುವಾಗಲೇ ಮರಣ ಹೊಂದಿದರು.

ಮುರಳಿಧರ. ಯಡಚಿ

ಓದಲೇ ಬೇಕಾದ ಸುದ್ದಿ

ಶ್ರೀಮುರಳಿ - ರುಕ್ಮಿಣಿ ವಸಂತ್ ನಟನೆಯ ಬಘೀರ ಸಿನಿಮಾ ರಿಲೀಸ್; ಥಿಯೇಟರ್‌ನಲ್ಲಿ ಹೇಗಿತ್ತು ಸೆಲೆಬ್ರೇಷನ್?

ಮುಂದಿನ ಲೇಖನ

August 2023 : ಆಗಸ್ಟ್ ತಿಂಗಳ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳ ಪಟ್ಟಿ ಇಲ್ಲಿದೆ..

KannadaStudy No1 Kannada Education Website

  • Information
  • ಜೀವನ ಚರಿತ್ರೆ

ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ | Dr. APJ Abdul Kalam Biography in Kannada

ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ Dr. APJ Abdul Kalam Biography abdul kalam jeevana charitre information in kannada

ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

Dr. APJ Abdul Kalam Biography in Kannada

ಈ ಲೇಖನಿಯಲ್ಲಿ ಅಬ್ದುಲ್‌ ಅವರ ಜೀವನ ಬಗ್ಗೆ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Dr. APJ Abdul Kalam Biography in Kannada

ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ವ್ಯಕ್ತಿಗಳಿಗೆ ಪ್ರೇರಣೆಯಾಗಿದ್ದಾರೆ. ವ್ಯಕ್ತಿಗಳು ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು ಮತ್ತು ಅವರನ್ನು ಸರ್ ಎಪಿಜೆ ಅಬ್ದುಲ್ ಕಲಾಂ ಎಂದು ಕರೆಯುತ್ತಿದ್ದರು. ಎಪಿಜೆ ಅಬ್ದುಲ್ ಕಲಾಂ ಯಾರೆಂದು ಹತ್ತಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಸಹ ತಿಳಿದಿದೆ. ಅವರು ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿ ತುಂಬಿದ ಭಾರತೀಯ ಏರೋಸ್ಪೇಸ್ ಸಂಶೋಧಕರಾಗಿದ್ದರು.

ಎಪಿಜೆ ಅಬ್ದುಲ್ ಕಲಾಂ ಜೀವನಚರಿತ್ರೆ

“ಭಾರತದ ಕ್ಷಿಪಣಿ ಮನುಷ್ಯ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎಪಿಜೆ ಅಬ್ದುಲ್ ಕಲಾಂ ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರೀತಿಯ ಮತ್ತು ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು. ಅಕ್ಟೋಬರ್ 15, 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಕಲಾಂ ಅವರು ವಿಜ್ಞಾನಿ, ಎಂಜಿನಿಯರ್ ಮತ್ತು ರಾಜಕಾರಣಿಯಾಗಿದ್ದರು, ಅವರು ಭಾರತದ ಕ್ಷಿಪಣಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಎಪಿಜೆ ಅಬ್ದುಲ್ ಕಲಾಂ ಅವರ ವಿನಮ್ರ ನಡವಳಿಕೆ, ಶಿಕ್ಷಣ ಮತ್ತು ಯುವಕರ ಬದ್ಧತೆ ಮತ್ತು ಅವರ ದೇಶಕ್ಕಾಗಿ ಅವರ ಆಳವಾದ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ.

ಎಪಿಜೆ ಅಬ್ದುಲ್ ಕಲಾಂ ಆರಂಭಿಕ ಜೀವನ, ಶಿಕ್ಷಣ

ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1981 ರಂದು ಪಂಬನ್ ದ್ವೀಪದ ರಾಮೇಶ್ವರಂನ ಯಾತ್ರಾ ಕೇಂದ್ರದಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇದು ಆಗ ಬ್ರಿಟಿಷ್ ಇಂಡಿಯಾದ ಅಡಿಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿತ್ತು ಮತ್ತು ಈಗ ತಮಿಳುನಾಡು ರಾಜ್ಯದಲ್ಲಿದೆ.

ಎಪಿಜೆ ಅಬ್ದುಲ್ ಕಲಾಂ ಅವರ ತಂದೆ ಜೈನುಲಾಬ್ದೀನ್ ಮರಕಾಯರ್ ಅವರು ದೋಣಿ ಮಾಲೀಕ ಮತ್ತು ಸ್ಥಳೀಯ ಮಸೀದಿಯ ಇಮಾಮ್ ಆಗಿದ್ದು, ಅವರ ತಾಯಿ ಆಶಿಯಮ್ಮ ಗೃಹಿಣಿಯಾಗಿದ್ದರು. ಅವರ ತಂದೆ ರಾಮೇಶ್ವರಂ ಮತ್ತು ಈಗ ಜನವಸತಿ ಇಲ್ಲದ ಧನುಷ್ಕೋಡಿ ನಡುವೆ ಹಿಂದೂ ಯಾತ್ರಿಕರನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಕರೆದೊಯ್ಯುವ ದೋಣಿಯನ್ನು ಹೊಂದಿದ್ದರು.

ಎಪಿಜೆ ಅಬ್ದುಲ್ ಕಲಾಂ ಅವರ ಕುಟುಂಬದಲ್ಲಿ ನಾಲ್ಕು ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಕಿರಿಯರಾಗಿದ್ದರು. ಅವರ ಕುಟುಂಬವು ಶ್ರೀಮಂತ ಮರಕಾಯರ್ ವ್ಯಾಪಾರಿಗಳು ಮತ್ತು ಭೂಮಾಲೀಕರಾಗಿದ್ದರು, ಹಲವಾರು ಆಸ್ತಿಗಳು ಮತ್ತು ದೊಡ್ಡ ಜಮೀನುಗಳನ್ನು ಹೊಂದಿದ್ದರು. 1914 ರಲ್ಲಿ ಪಂಬನ್ ಸೇತುವೆಯನ್ನು ಮುಖ್ಯ ಭೂಭಾಗಕ್ಕೆ ತೆರೆಯುವುದರೊಂದಿಗೆ, ವ್ಯವಹಾರಗಳು ವಿಫಲವಾದವು ಮತ್ತು ಪೂರ್ವಜರ ಮನೆಯನ್ನು ಹೊರತುಪಡಿಸಿ ಕುಟುಂಬದ ಅದೃಷ್ಟ ಮತ್ತು ಆಸ್ತಿಗಳು ಕಾಲಾನಂತರದಲ್ಲಿ ಕಳೆದುಹೋದವು.

ಚಿಕ್ಕ ಹುಡುಗನಾಗಿದ್ದಾಗ, ಬಡತನದಿಂದ ಬಳಲುತ್ತಿದ್ದ ಮತ್ತು ಅಲ್ಪ ಆದಾಯದಲ್ಲಿ ಬದುಕುತ್ತಿದ್ದ ತನ್ನ ಕುಟುಂಬವನ್ನು ಪೋಷಿಸಲು ಕಲಾಂ ಪತ್ರಿಕೆಗಳನ್ನು ಮಾರಬೇಕಾಯಿತು.

ಎಪಿಜೆ ಅಬ್ದುಲ್ ಕಲಾಂ ಶಿಕ್ಷಣ

ಎಪಿಜೆ ಅಬ್ದುಲ್ ಕಲಾಂ ಅವರ ಶಾಲಾ ವರ್ಷಗಳಲ್ಲಿ ಸರಾಸರಿ ಶ್ರೇಣಿಗಳನ್ನು ಹೊಂದಿದ್ದರು, ಆದಾಗ್ಯೂ, ಅವರು ಕಲಿಯಲು ಬಲವಾದ ಬಯಕೆಯನ್ನು ಹೊಂದಿದ್ದ ಪ್ರಕಾಶಮಾನವಾದ ಮತ್ತು ಶ್ರಮಶೀಲ ವಿದ್ಯಾರ್ಥಿ ಎಂದು ವಿವರಿಸಲಾಗಿದೆ. ಅವರು ತಮ್ಮ ಅಧ್ಯಯನದಲ್ಲಿ, ವಿಶೇಷವಾಗಿ ಗಣಿತಶಾಸ್ತ್ರದಲ್ಲಿ ಗಂಟೆಗಳ ಕಾಲ ಕಳೆದರು. ಶ್ವಾರ್ಟ್ಜ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅಬ್ದುಲ್ ಕಲಾಂ ಅವರು ಸೇಂಟ್ ಜೋಸೆಫ್ ಕಾಲೇಜಿಗೆ ಹಾಜರಾಗಲು ಹೋದರು ಮತ್ತು 1954 ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಲು 1955 ರಲ್ಲಿ ಮದ್ರಾಸ್ಗೆ ತೆರಳಿದರು.

ಎಪಿಜೆ ಅಬ್ದುಲ್ ಕಲಾಂ ಅವರ ರಾಜಕೀಯ ವೃತ್ತಿ

2002 ರಲ್ಲಿ, ಕೆಆರ್ ನಾರಾಯಣನ್ ಅವರ ಉತ್ತರಾಧಿಕಾರಿಯಾಗಿ ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು 2002 ರಿಂದ 2007 ರವರೆಗೆ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಮತ್ತು ಭಾರತದ ಅತ್ಯಂತ ಪ್ರೀತಿಯ ರಾಷ್ಟ್ರಪತಿಗಳಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟರು. ಅವರ ಅಧ್ಯಕ್ಷತೆಯಲ್ಲಿ, ಕಲಾಂ ಅವರು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದರು. ಎಪಿಜೆ ಅಬ್ದುಲ್ ಕಲಾಂ ಅವರು ಆಗಾಗ್ಗೆ ಭಾರತದಾದ್ಯಂತ ಪ್ರಯಾಣಿಸುತ್ತಿದ್ದರು, ಸಾಮಾನ್ಯ ನಾಗರಿಕರನ್ನು ಭೇಟಿಯಾಗುತ್ತಾರೆ ಮತ್ತು ಅವರ ಸಮಸ್ಯೆಗಳನ್ನು ಆಲಿಸಿದರು. ಕಲಾಂ ಅವರ ವಿನಮ್ರ ನಡವಳಿಕೆ, ಅವರ ನಿಗರ್ವಿ ಸ್ವಭಾವ ಮತ್ತು ಅವರ ದೇಶಕ್ಕಾಗಿ ಅವರ ಆಳವಾದ ಪ್ರೀತಿಗೆ ಹೆಸರುವಾಸಿಯಾಗಿದ್ದರು.

ಪ್ರಶಸ್ತಿಗಳು ಮತ್ತು ಗೌರವಗಳು

ಪಿಜೆ ಅಬ್ದುಲ್ ಕಲಾಂ ಅವರು 1981 ರಲ್ಲಿ ಪದ್ಮಭೂಷಣ, 1990 ರಲ್ಲಿ ಪದ್ಮ ವಿಭೂಷಣ, ಮತ್ತು 1997 ರಲ್ಲಿ ಭಾರತ ರತ್ನ ಸೇರಿದಂತೆ ಭಾರತ ಸರ್ಕಾರದಿಂದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ನ್ಯಾಷನಲ್ ಸ್ಪೇಸ್ ಸೊಸೈಟಿ “ಬಾಹ್ಯಾಕಾಶ-ಸಂಬಂಧಿತ ಯೋಜನೆಯ ನಿರ್ವಹಣೆ ಮತ್ತು ನಾಯಕತ್ವದಲ್ಲಿ ಶ್ರೇಷ್ಠತೆಯನ್ನು ಗುರುತಿಸಲು”. ಅವರ ಮರಣದ ನಂತರ, ತಮಿಳುನಾಡು ರಾಜ್ಯ ಸರ್ಕಾರವು ಅವರ ಜನ್ಮದಿನವಾದ ಅಕ್ಟೋಬರ್ 15 ಅನ್ನು ರಾಜ್ಯಾದ್ಯಂತ “ಯುವ ನವೋದಯ ದಿನ” ಎಂದು ಆಚರಿಸಲಾಗುವುದು ಎಂದು ಘೋಷಿಸಿತು.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಯಾರು?

ಡಾ ವಿಕ್ರಮ್ ಸಾರಾಭಾಯ್.

ಭಾರತದ ರಾಷ್ಟ್ರಧ್ವಜದ ಮೇಲೆ ಬಿಳಿ ಬಣ್ಣದ ಅರ್ಥವೇನು?

ಶಾಂತಿ ಮತ್ತು ಸತ್ಯ.

ಇತರೆ ವಿಷಯಗಳು :

ಮಾತೃಭಾಷೆ ಮಹತ್ವ ಪ್ರಬಂಧ

ಸಾಮಾಜಿಕ ಜಾಲತಾಣಗಳ ಉಪಯೋಗ ಪ್ರಬಂಧ

' src=

kannadastudy

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

contents

ಭಾಷೆಯನ್ನು ಆಯ್ಕೆಮಾಡಿ

ಕನ್ನಡದ ವಿವರಗಳು

Abdul Kalam Birth Anniversary: ಮಾ ತುಝೆ ಸಲಾಂ ಎಂದು ಸರಳತೆ ಮೆರೆದ ಅಬ್ದುಲ್‌ ಕಲಾಂ; ನಾಡು ಕಂಡ ಧೀಮಂತ ನಾಯಕನಿಗೆ ಅಕ್ಷರದ ನುಡಿನಮನ

ʼಮಾ ತುಝೇ ಸಲಾಂʼ ಎಂದು ಭಾರತಮಾತೆಯ ಅಡಿದಾವರೆಗಳಿಗೆ ತಮ್ಮ ಬುದ್ಧಿ, ಶಕ್ತಿ, ಸಾಮರ್ಥ್ಯ, ಪ್ರತಿಭೆ ಎಲ್ಲವನ್ನೂ ಕಲಾಂ ಅರ್ಪಿಸಿದ್ದರು. ಅವರ ಬದುಕೇ ಒಂದು ಸಂದೇಶ. ಒಂದು ಮೇಲ್ಪಂಕ್ತಿ. ನಾವದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕಷ್ಟೆ. ಬರಹ: ದು ಗು ಲಕ್ಷ್ಮಣ.

ನಾಡು ಕಂಡ ಧೀಮಂತ ನಾಯಕ ಅಬ್ದುಲ್‌ ಕಲಾಂರಿಗೆ ಅಕ್ಷರದ ನುಡಿನಮನ

ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದರು. ಆಟೊ ಚಾಲಕರು ತಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ಹಣದಿಂದಲೇ ಅವರದೊಂದು ಫ್ಲೆಕ್ಸ್‌ ತಯಾರಿಸಿ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಕಟ್ಟಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು. ಆ ಫ್ಲೆಕ್ಸ್‌ನಲ್ಲಿ ಅಪ್ಪಿತಪ್ಪಿ ಕೂಡ ಆಟೊ ಚಾಲಕರು ತಮ್ಮ ಭಾವಚಿತ್ರ ಛಾಪಿಸಿಕೊಂಡಿರಲಿಲ್ಲ. ಅದರಲ್ಲಿದ್ದಿದ್ದು ನಿಧನರಾದ ಆ ಮಹಾನುಭಾವನ ಚಿತ್ರ ಮಾತ್ರ.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ನಿಧನರಾದಾಗ (ನಿಧನ: 27 ಜುಲೈ 2015; ಜನನ: 15 ಅಕ್ಟೋಬರ್‌ 1931) ಇಡೀ ದೇಶದಾದ್ಯಂತ ಕಂಡುಬಂದ ದೃಶ್ಯಗಳಿವು. ಬಹುಶಃ ಇದುವರೆಗೆ ಯಾವ ರಾಷ್ಟ್ರಪತಿಗೂ ಇಷ್ಟೊಂದು ಅಭೂತಪೂರ್ವ ಶ್ರದ್ಧಾಂಜಲಿ ಸಲ್ಲಿಸಿದ ನಿದರ್ಶನವಿಲ್ಲ. ಜವಾಹರಲಾಲ್‌ ನೆಹರೂ ಅವರನ್ನು ʼಮಕ್ಕಳ ಚಾಚಾʼ ಎನ್ನುವುದುಂಟು. ಆದರೆ ನೆಹರೂ ಸತ್ತಾಗಲೂ ದೇಶದ ಮಕ್ಕಳು ಈ ಪರಿ ಕಣ್ಣೀರು ಸುರಿಸಿರಲಿಕ್ಕಿಲ್ಲ. ಚೆನ್ನೈಯಲ್ಲಿ ಮುಂಬತ್ತಿ ಹಚ್ಚಿ ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಿದ ಶಾಲಾ-ಕಾಲೇಜು ಮಕ್ಕಳ ಕಣ್ಣಲ್ಲಿ ತಮ್ಮ ಕುಟುಂಬದ ಹಿರಿಯರೊಬ್ಬರನ್ನು ಕಳೆದುಕೊಂಡ ದುಃಖ. ಮಕ್ಕಳ ಹೃದಯದಲ್ಲಿ ಡಾ.ಕಲಾಂ ಆ ಪರಿಯಾಗಿ ಆವರಿಸಿಕೊಂಡಿದ್ದರು. ತಮ್ಮ ಮನೆಯ ಪ್ರೀತಿಯ ತಾತನೋ, ದೊಡ್ಡಪ್ಪನೋ ತೀರಿ ಹೋದಾಗ ಆಗುವಂತಹ ಸಂಕಟ ಅದು.

ಕಲಾಂ ತೀರಿಕೊಂಡ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ತಲೆಬರಹಗಳೇ ಅವರೆಷ್ಟು ಜನಪ್ರಿಯ, ಜನಮನ ಗೆದ್ದ ಮಾಜಿ ರಾಷ್ಟ್ರಪತಿ ಎಂಬುದು ಶೃತಪಟ್ಟಿತ್ತು. ʼಜನರ ರಾಷ್ಟ್ರಪತಿ ಇನ್ನಿಲ್ಲʼ, ‘Dies doing what he did best; Igniting minds’, ‘People’s President passes away’, ‘A hospitable President’... ಇಂತಹ ಅದೆಷ್ಟೋ ಮನ ಮಿಡಿಯುವ ಶೀರ್ಷಿಕೆಗಳು. ಮಾಧ್ಯಮ ಮಿತ್ರರು ಕಲಾಂ ಅವರನ್ನು ಹೊಗಳಲೆಂದು ಕೊಟ್ಟ ಶೀರ್ಷಿಕೆಗಳಾಗಿರಲಿಲ್ಲ ಅವು. ಅವೆಲ್ಲ ಮಾಧ್ಯಮ ಮಿತ್ರರ ಮನದಾಳದಿಂದ ಹೊಮ್ಮಿದ ಶೀರ್ಷಿಕೆಗಳು. ಕಲಾಂ ಅವರನ್ನು ಹೊಗಳುವುದರಿಂದ ಮಾಧ್ಯಮ ಮಿತ್ರರಿಗೆ ಯಾವ ಬಗೆಯ ʼಲಾಭʼವೂ ಇರಲಿಲ್ಲ. ಮಹಾನ್‌ ವ್ಯಕ್ತಿಗೆ ಆತ ತೀರಿಕೊಂಡ ದಿನವಾದರೂ ಮನ ಮಿಡಿಯುವ, ಶ್ರೇಷ್ಠ ಅಕ್ಷರ ಪೂಜೆ ಸಲ್ಲಿಸುವ ಕಾಳಜಿಯ ಪ್ರತೀಕ ಅದಾಗಿತ್ತು.

ದಿಗ್ವಿಜಯ ಸಿಂಗ್‌ ಮನದಾಳದ ಮಾತು

ʼಇಬ್ಬರು ಭಾರತೀಯ ಮುಸ್ಲಿಮರ ಅಂತ್ಯಕ್ರಿಯೆ ಒಂದೇ ದಿನ ನಡೆದಿರುವುದು ಎಂತಹ ಕಾಕತಾಳೀಯ! ಒಬ್ಬರು ತಮ್ಮ ಸಾದನೆಯ ಮೂಲಕ ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಹ ಸಾಧನೆ ಮಾಡಿದ ಡಾ.ಕಲಾಂ, ಮತ್ತೊಬ್ಬ ದೇಶದ್ರೋಹದಿಂದ ಇಡೀ ಸಮುದಾಯ ತಲೆತಗ್ಗಿಸುವಂತೆ ಮಾಡಿದ ಮೆಮನ್ʼ - ಇದು ಪ್ರಗತಿಪರರ, ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೆಂದೇ ಬಿಂಬಿತವಾಗಿರುವ ಪ್ರಜಾವಾಣಿಯ ಮುಖಪುಟದಲ್ಲಿ ಕಲಾಂ ಅಂತ್ಯಕ್ರಿಯೆ ನಡೆದ ದಿನ ಪ್ರಕಟವಾದ ಬಾಕ್ಸ್‌ ಐಟಂ. ಅಂದ ಹಾಗೆ ಈ ಹೇಳಿಕೆಯನ್ನು ನೀಡಿದವರು ಬಿಜೆಪಿ ಅಥವಾ ಆರೆಸ್ಸೆಸ್‌ನ ಪ್ರಮುಖರಲ್ಲ. ಬಜರಂಗದಳದವರಂತೂ ಖಂಡಿತ ಅಲ್ಲ. ಈ ಹೇಳಿಕೆ ನೀಡಿದ್ದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್! ದಿಗ್ವಿಜಯ ಸಿಂಗ್‌ ಅವರ ಮನದಾಳದಿಂದ ಹೊಮ್ಮಿದ ಭಾವನೆ ಅದಾಗಿತ್ತು. ಅವರು ಸಾರ್ವಜನಿಕವಾಗಿ ಹಲವು ಬಾರಿ ಯಡವಟ್ಟಿನ, ಎಗ್ಗಿಲ್ಲದ ಏನೇನೋ ಹೇಳಿಕೆಗಳನ್ನು ಕೊಟ್ಟು ವಿವಾದ ಸೃಷ್ಟಿಸುತ್ತಲೇ ಇರುತ್ತಾರೆ. ಈ ಹೇಳಿಕೆ ಮಾತ್ರ ಎಡವಟ್ಟಿನದಾಗಿರಲಿಲ್ಲ. ʼಹೆಮ್ಮೆಯ ಕಲಾಂ, ದೇಶದ್ರೋಹಿ ಮೆಮನ್‌ʼ ಎಂಬ ವಿಶ್ಲೇಷಣೆ ದಿಗ್ವಿಜಯ ಸಿಂಗ್‌ ಅವರ ಮನದಾಳದ ಮಾತಾಗಿತ್ತು.

ಕ್ಷಿಪಣಿಗಳಿಗೆ ಭಾರತೀಯ ಹೆಸರು

ಅವುಲ್‌ ಪಕೀರ್‌ ಜೈನುಲಬ್ದೀನ್‌ ಅಬ್ದುಲ್‌ ಕಲಾಂ (ಎಪಿಜೆ ಅಬ್ದುಲ್‌ ಕಲಾಂ) ಹುಟ್ಟಿದ್ದು ಮುಸಲ್ಮಾನನಾಗಿ. ಆದರೆ ಬೆಳೆದಿದ್ದು ಮಾತ್ರ ಅಪ್ಪಟ ಭಾರತೀಯನಾಗಿ. ಅವರೆಂದೂ ಜಾತಿ, ಮತ, ಪಂಥ, ಪಕ್ಷ ಮುಂತಾದ ಸಂಕುಚಿತ, ಮತಾಂಧ ಗೋಡೆಗಳನ್ನು ತಮ್ಮ ಸುತ್ತ ಕಟ್ಟಿಕೊಂಡಿರಲಿಲ್ಲ. ಇಂತಹ ಯಾವುದೇ ಗೋಡೆಗಳಿಲ್ಲದ ಆಲಯದಲ್ಲಿರಲು ಅವರು ಇಷ್ಟಪಡುತ್ತಿದ್ದರು. ತಾನು ಹುಟ್ಟಿದ್ದು ಭಾರತದ ಮಣ್ಣಿನಲ್ಲಿ. ಹುಟ್ಟಿದ ನೆಲಕ್ಕೆ ಋಣಿಯಾಗಿರಬೇಕು, ಇಲ್ಲಿನ ಸಂಸ್ಕೃತಿ, ಪರಂಪರೆಗೆ ಗೌರವ ಸದಾ ಸಲ್ಲಿಸಬೇಕು ಎಂಬ ಎಚ್ಚರ ಅವರಲ್ಲಿ ಕೊನೆಯುಸಿರಿನವರೆಗೂ ಇತ್ತು. ಅವರು ಡಿಆರ್‌ಡಿಓದಲ್ಲಿ ಕ್ಷಿಪಣಿ ವಿಜ್ಞಾನಿಯಾಗಿ, ಅವುಗಳ ತಯಾರಿಕೆಯಲ್ಲಿ ನಿರತರಾಗಿದ್ದಾಗಲೂ ಈ ಎಚ್ಚರ ಅವರಲ್ಲಿತ್ತು. ಹಾಗೆಂದೇ ತಾವು ಸಂಶೋಧಿಸಿ ತಯಾರಿಸಿದ ಕ್ಷಿಪಣಿಗಳಿಗೆ ಅವರಿಟ್ಟ ಹೆಸರುಗಳು: ಹಿಂದು ಪುರಾಣ ಮೂಲದ ಆಕಾಶ್‌, ಅಗ್ನಿ, ಪೃಥ್ವಿ, ತ್ರಿಶೂಲ್‌, ಬ್ರಹ್ಮೋಸ್‌, ಪ್ರಹಾರ್‌, ಅಮೋಘ, ಸಾಗರಿಕಾ ಇತ್ಯಾದಿ. ಮುಸ್ಲಿಮರಲ್ಲಿ ಸಹಜವಾಗಿರುವ ಮತಾಂಧತೆ ಅವರೊಳಗಿದ್ದಿದ್ದರೆ ಆ ಕ್ಷಿಪಣಿಗಳಿಗೆ ಘೋರಿ, ಘಜನಿ, ಔರಂಗಜೇಬ್‌, ಅಕ್ಬರ್... ಮುಂತಾದ ಹೆಸರುಗಳನ್ನು ಇಡುತ್ತಿದ್ದರೇನೋ! ಅಸಲಿಗೆ ಕಲಾಂ ಅವರನ್ನು ಕೊನೆಯವರೆಗೂ ಅಂತಹ ಮತಾಂಧತೆ ಕಾಡಲೇ ಇಲ್ಲ. ಈ ದೇಶದ ಸಂಸ್ಕೃತಿ, ಪರಂಪರೆ ಯಾವುದೆಂಬುದರ ಸ್ಪಷ್ಟ ಅರಿವು ಅವರಿಗಿತ್ತು. ಕುರಾನ್‌ ಬಗ್ಗೆ ಇದ್ದಷ್ಟೇ ಶ್ರದ್ಧೆ ಭಗವದ್ಗೀತೆ, ರಾಮಾಯಣದ ಬಗ್ಗೆಯೂ ಇತ್ತು. ಮುಸಲ್ಮಾನರಾಗಿದ್ದರೂ ಅವರು ಮಸೀದಿಗಳಿಗೆ ತೆರಳಿದ್ದು ತೀರಾ ಕಡಿಮೆ. ಹಿಂದು ಮಠ-ಮಂದಿರಗಳಿಗೆ, ದೇವಾಲಯಗಳಿಗೆ ಹೋಗಿದ್ದೇ ಹೆಚ್ಚು. ಕರ್ನಾಟಕದ ಪ್ರವಾಸ ಸಂದರ್ಭದಲ್ಲಿ ಸಿದ್ಧಗಂಗಾ, ಆದಿಚುಂಚನಗಿರಿ, ಧರ್ಮಸ್ಥಳ, ಶೃಂಗೇರಿ ಮೊದಲಾದ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಅಲ್ಲೆಲ್ಲ ಪಂಚೆಯುಟ್ಟು, ಶಾಲು ಹೊದೆದು ಶ್ರದ್ಧಾ ಭಕ್ತಿಗಳನ್ನು ಪ್ರಕಟಿಸಿದ್ದರು.

ಅಪ್ಪಟ ಸ್ವದೇಶಾಭಿಮಾನಿ

ಹಾಗೆ ನೋಡಿದರೆ ದೇಗುಲಗಳ ನಗರ ರಾಮೇಶ್ವರಂನಲ್ಲಿ ಅವರು ಹುಟ್ಟಿ ಬೆಳೆದದ್ದೇ ಹಿಂದೂ ಪರಿಸರದಲ್ಲಿ. ಭಾರತೀಯ ಚಿಂತನೆ, ಸ್ವಭಾವ ಮೈಗೂಡಿದ್ದು, ಮನದಾಳದಲ್ಲಿ ಬೇರೂರಿದ್ದು ಅದೇ ಕಾರಣದಿಂದಿರಬಹುದು. ವಿಜ್ಞಾನಿಯಾಗಿದ್ದಾಗ, ರಾಷ್ಟ್ರಪತಿಯಾಗಿದ್ದಾಗ ಅಥವಾ ಮಾಜಿ ರಾಷ್ಟ್ರಪತಿಯಾಗಿದ್ದಾಗ ಅವರು ತಲೆಯ ಮೇಲೆ ಮುಸ್ಲಿಂ ಟೋಪಿ ಹಾಕಿರುವ ಯಾವುದೇ ಭಾವಚಿತ್ರಗಳು ಸಿಗುವುದಿಲ್ಲ. ಆದರೆ ಹಿಂದುಗಳಂತೆ ಲಕ್ಷಣವಾಗಿ ಧೋತಿಯುಟ್ಟು ಶಲ್ಯ ಹೊದೆದ ಭಾವಚಿತ್ರಗಳು ಸಾಕಷ್ಟು ಲಭ್ಯವಿದೆ. ಸಂಗೀತದ ಬಗ್ಗೆ ಅಪಾರ ಒಲವಿದ್ದ ಕಲಾಂ ರುದ್ರವೀಣೆ ನುಡಿಸುತ್ತಿದ್ದರು. ರುದ್ರವೀಣೆ ನುಡಿಸುವಾಗ ಅವರ ಡ್ರೆಸ್‌ಕೋಡ್‌ ಮತ್ತದೇ ಬಿಳಿಯ ಪಂಚೆ ಹಾಗೂ ಶಲ್ಯ.

ಅವರೊಬ್ಬ ಅಪ್ಪಟ ಸ್ವದೇಶಾಭಿಮಾನಿ ಎನ್ನುವುದಕ್ಕೆ ಸ್ವದೇಶಿ ತಂತ್ರಜ್ಞಾನದ ಮೂಲಕವೇ ಭಾರತದ ಮೊಟ್ಟಮೊದಲ ಪರಮಾಣು ಬಾಂಬ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಿದರ್ಶನ. ಅಮೆರಿಕದ ಹದ್ದುಗಣ್ಣು ತಪ್ಪಿಸಿ ಪೋಖ್ರಾನ್‌ನಲ್ಲಿ ಪರಮಾಣು ಬಾಂಬ್‌ನ ಯಶಸ್ವಿ ಸ್ಫೋಟ ನಡೆಸಿದ್ದರ ಹಿಂದೆ ಕಲಾಂ ಅವರ ಅದ್ಭುತ ಬುದ್ಧಿಮತ್ತೆ ಹಾಗೂ ಕೌಶಲ ಅಡಗಿತ್ತು ಎಂಬುದನ್ನು ಮರೆಯುವಂತಿಲ್ಲ. ವಾಜಪೇಯಿ ಸರ್ಕಾರದ ಹೆಮ್ಮೆಯ ಸಾಧನೆ ಅದೆಂದು ಬಿಂಬಿತವಾದರೂ ಅದರ ಸಂಪೂರ್ಣ ಕ್ರೆಡಿಟ್‌ ಸಲ್ಲಬೇಕಾದದ್ದು ಕಲಾಂ ಅವರಿಗೇ. ಆದರೆ ಅವರೆಂದೂ ಅದು ತನ್ನ ಸಾಧನೆ ಎಂದು ಎದೆ ತಟ್ಟಿಕೊಳ್ಳಲಿಲ್ಲ. It is a team work ಎಂದಷ್ಟೇ ತಣ್ಣಗೆ ಹೇಳಿದ್ದರು. ಭಾರತ ಸಶಕ್ತ, ಸದೃಢ ದೇಶವಾಗಿ ಹೊಮ್ಮಬೇಕಾದರೆ, ಸ್ವಾವಲಂಬಿಯಾಗಿ ತಲೆಯೆತ್ತಬೇಕಾದರೆ ಅದು ತನ್ನದೇ ಪರಮಾಣು ಬಾಂಬ್‌ ಹೊಂದಿರಬೇಕು ಎಂಬುದಷ್ಟೇ ಕಲಾಂ ಅವರ ಕಾಳಜಿಯಾಗಿತ್ತು.

ಅನುಭವ ಜೀವನಪಾಠ

ಕಲಾಂ ಅವರ ತಂದೆ ಯಾಂತ್ರೀಕೃತ ಬೋಟ್‌ವೊಂದರ ಮಾಲಿಕರಾಗಿದ್ದರು. ಒಮ್ಮೆ ಸಮುದ್ರದ ನಡುವೆ ಸುನಾಮಿಗೆ ಸಿಲುಕಿ ಆ ಬೋಟ್‌ ನುಚ್ಚುನೂರಾಯಿತು. ಜೀವನ ನಿರ್ವಹಣೆಯ ಆಧಾರಸ್ತಂಭವೇ ಕಳಚಿಹೋದಂತಾಗಿತ್ತು. ಆದರೆ ಅವರ ತಂದೆ ಕಂಗಾಲಾಗಿ ಸುಮ್ಮನೆ ಕುಳಿತಿರಲಿಲ್ಲ. ಹೇಗೋ ಸಾಲ ಮಾಡಿ ಮತ್ತೊಂದು ಬೋಟ್‌ ಖರೀದಿಸಿ ವ್ಯವಹಾರ ಮುಂದುವರಿಸಿದ್ದರು. ಕಲಾಂ ಅವರಿಗೆ ಈ ಘಟನೆ ಒಂದು ಅನುಭವದ ಜೀವನ ಪಾಠ ಆಗಿತ್ತು. ಹಾಗಾಗಿಯೇ ಅವರು ಇಸ್ರೋದ ಪಿಎಸ್‌ಎಲ್‌ವಿ ಉಪಗ್ರಹಗಳು ಮೊದಮೊದಲು ವಿಫಲಗೊಂಡಾಗ ಅಧೀರರಾಗಿರಲಿಲ್ಲ. ಮರಳಿ ಯತ್ನವನ್ನು ಮಾಡಿ ಎಂದು ವಿಜ್ಞಾನಿಗಳನ್ನು ಹುರಿದುಂಬಿಸುತ್ತಿದ್ದರು. ಉಪಗ್ರಹ ಉಡಾವಣೆ ಯಶಸ್ವಿಯಾದಾಗ ಸಂತಸಪಟ್ಟು, ಅದರ ಕ್ರೆಡಿಟ್‌ ಅನ್ನು ತಮ್ಮ ತಂಡದವರಿಗೆ ಹಂಚುತ್ತಿದ್ದರು. ಸೋಲುಂಟಾದಾಗ ಕುಗ್ಗಲಿಲ್ಲ. ಗೆಲುವು ದೊರೆತಾಗ ಹಿರಿಹಿರಿ ಹಿಗ್ಗಿ ಕರ್ತವ್ಯ ಮರೆಯಲಿಲ್ಲ.

ಯುವಪೀಳಿಗೆ ಮೇಲೆಯೇ ಕಲಾಂ ಕಣ್ಣು

ಯುವಶಕ್ತಿ ದೇಶದ ಆಸ್ತಿ ಎಂಬ ವಿವೇಕಾನಂದರ ವಿಚಾರವೇ ಕಲಾಂ ಅವರ ವಿಚಾರವೂ ಆಗಿತ್ತು. ಬದುಕಿನ ಕೊನೆಯುಸಿರಿನವರೆಗೆ ಅವರು ಪ್ರೀತಿಸಿದ್ದು ಮಕ್ಕಳಿಗೆ, ಯುವಕ-ಯುವತಿಯರಿಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ವಿಸ್ಮಯದ ಬಗ್ಗೆ ಪಾಠ ಹೇಳುವುದನ್ನು. 2015 ರ ಜುಲೈ 27 ರಂದು ಶಿಲ್ಲಾಂಗ್‌ನಲ್ಲಿ ಕೊನೆಯುಸಿರೆಳೆಯುವ ಮುನ್ನ ಅವರು ಐಐಎಂ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದರು. ಪಾಠ ಮಾಡುತ್ತಲೇ ವೇದಿಕೆಯಲ್ಲಿ ಕುಸಿದಿದ್ದರು.

ಭುವನೇಶ್ವರಕ್ಕೆ ಒಮ್ಮೆ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮಕ್ಕೆ ಬಂದಿದ್ದಾಗಿನ ಘಟನೆ. ಸಭೆಯ ಮುಂಭಾಗದ ಸಾಲುಗಳಲ್ಲಿ ಗಣ್ಯಾತಿಗಣ್ಯರು. ಹಿಂಬದಿಯ ಸಾಲುಗಳಲ್ಲಿ ಪದವಿ ವಿದ್ಯಾರ್ಥಿಗಳು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಲಾಂ ಗಣ್ಯರನ್ನು ಗಮನಿಸದೆ, ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿ ಅವರೊಡನೆ ಹರಟೆ ಹೊಡೆದರು. ತಮಾಷೆ ಮಾಡಿದರು. ವಿದ್ಯಾರ್ಥಿಗಳ ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸಿದರು. ಇನ್ನು ಮುಂದೆ ವಿದ್ಯಾರ್ಥಿಗಳನ್ನು ಸಭೆಯ ಮುಂಭಾಗದ ಸಾಲುಗಳಲ್ಲಿ ಕೂರಿಸಿ, ಗಣ್ಯರನ್ನು ಹಿಂಬದಿ ಸಾಲುಗಳಲ್ಲಿ ಕೂರಿಸಿ ಎಂದು ಅಲ್ಲಿದ್ದ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು. ಅದಾದ ಬಳಿಕ ಕಲಾಂ ತಿಳಿಸಿದಂತೆಯೇ ಸಭೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ಒಡಿಶಾದ ಮಾಜಿ ರಾಜ್ಯಪಾಲ ಎಂ.ಎಂ.ರಾಜೇಂದ್ರನ್‌ ನೆನಪಿಸಿಕೊಳ್ಳುತ್ತಾರೆ.

ಸರಳತೆಯ ಸಾಕಾರಮೂರ್ತಿ

ಕಲಾಂ ವಿಜ್ಞಾನಿಯಾಗಿದ್ದಾಗ ಎಂದೂ ಕೋಟು, ಟೈ ಧರಿಸಿದವರಲ್ಲ. ಸರಳ ಉಡುಗೆ, ಸರಳವಾದ ಸಸ್ಯಾಹಾರವೇ ಅವರಿಗಿಷ್ಟ. ಮೊಸರನ್ನ, ಉಪ್ಪಿನಕಾಯಿ ಇದ್ದರಂತೂ ಅವರಿಗದೇ ಮೃಷ್ಟಾನ್ನ ಭೋಜನ. ರಾಷ್ಟ್ರಪತಿಯಾದ ಮೇಲೆ ಕೋಟು ಹಾಕಬೇಕೆಂದು ಪ್ರಧಾನಿ ವಾಜಪೇಯಿಯವರೇ ಆಗ್ರಹಿಸಿದಾಗ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದರು.

ಕಲಾಂ ಜನರ ರಾಷ್ಟ್ರಪತಿಯಾಗಿದ್ದರು. ರಾಷ್ಟ್ರಪತಿ ಭವನವೆಂಬ ಇರುವೆಯೂ ನುಸುಳಲು ಸಾಧ್ಯವಾಗದ ಭದ್ರಕೋಟೆಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟರು. ರಾಷ್ಟ್ರಪತಿ ಒಬ್ಬ ಸರಳ ವ್ಯಕ್ತಿಯಾಗಿಯೂ ಬದುಕಲು ಸಾಧ್ಯ ಎಂದು ತೋರಿಸಿಕೊಟ್ಟರು. ಅಪ್ಪಟ ಸಸ್ಯಾಹಾರಿಯಾಗಿದ್ದ ಕಲಾಂ ಇತರರು ಹಾಗೇ ಇರಬೇಕೆಂದು ಬಯಸಿದವರಲ್ಲ. ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಮಾವೇಶ ನಡೆದಾಗಲೆಲ್ಲ ಮಾಂಸಾಹಾರಿಗಳಿಗೆ ಅತ್ಯುತ್ತಮ ಮಾಂಸಾಹಾರದ ಅಡುಗೆ ಇರುವಂತೆ ಅವರೇ ಗಮನ ಹರಿಸುತ್ತಿದ್ದರು. ಮೆನು ಯಾವುದಿರಬೇಕೆಂದು ಅವರೇ ಸೂಚಿಸುತ್ತಿದ್ದರು! ಅಂತಹ ಔದಾರ್ಯದ ಆತಿಥ್ಯ ಅವರದು.

ರಾಷ್ಟ್ರಪತಿ ಭವನಕ್ಕೆ ಹೋಗುವಾಗ ಕಲಾಂ ಅವರು ತೆಗೆದುಕೊಂಡು ಹೋಗಿದ್ದು ಸ್ವಂತದ ಸಾಮಗ್ರಿಗಳ ಒಂದೆರಡು ಸೂಟ್‌ಕೇಸ್‌ಗಳು. ನಿವೃತ್ತರಾಗಿ ಅಲ್ಲಿಂದ ನಿರ್ಗಮಿಸುವಾಗಲೂ ಅವರು ವಾಪಸ್‌ ತಂದಿದ್ದು ಅಷ್ಟೇ ಲಗೇಜು. ಇವರ ನಂತರ ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲ್‌, ಇವರಿಗಿಂತ ಹಿಂದೆ ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಮುಂತಾದವರು ನಿವೃತ್ತಿಯ ಬಳಿಕ ರಾಷ್ಟ್ರಪತಿ ಭವನದಿಂದ ಟ್ರಕ್‌ಗಟ್ಟಲೆ ಸಾಮಾನುಗಳನ್ನು ಸಾಗಿಸಿದ್ದರು. ತಾನು ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿದ ವೆಚ್ಚವನ್ನೂ ಸರ್ಕಾರವೇ ಭರಿಸಬೇಕೆಂದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಒಮ್ಮೆ ಕ್ಯಾತೆ ತೆಗೆದಿದ್ದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂಥವರ ನಡುವೆ ಕಲಾಂ ಸರಳತೆಯ ಸಾಕಾರಮೂರ್ತಿಯಾಗಿ, ಮಾಣಿಕ್ಯದಂತೆ ಮಿನುಗಿದ್ದರು.

ಚೆಕ್ ಪಾವತಿಸಿ ಗ್ರೈಂಡರ್‌ ಖರೀದಿ‌

ಕಲಾಂ ರಾಷ್ಟ್ರಪತಿಯಾಗಿದ್ದಾಗ ಒಮ್ಮೆ ತಮಿಳುನಾಡಿನ ಈರೋಡ್‌ಗೆ ಒಂದು ಸಮಾರಂಭಕ್ಕೆ ಬಂದಿದ್ದರು. ಆ ಸಮಾರಂಭವನ್ನು ಪ್ರಾಯೋಜಿಸಿದ್ದು ಸೌಭಾಗ್ಯ ವೆಟ್‌ಗ್ರೈಂಡರ್‌ ಸಂಸ್ಥೆ. ಸಮಾರಂಭದಲ್ಲಿ ಸಂಸ್ಥೆಯ ಎಂ.ಡಿ.ಯಾಗಿದ್ದ ವಿ.ಆದಿಕೇಶವನ್ ಕಲಾಂ ಅವರಿಗೆ ಗ್ರೈಂಡರ್‌ ಒಂದನ್ನು ಉಡುಗೊರೆಯಾಗಿ ನೀಡಿದಾಗ ಮೊದಲು ಕಲಾಂ ಅದನ್ನು ನಿರಾಕರಿಸಿದರು. ಆದರೆ ತೀರಾ ಒತ್ತಾಯಿಸಿದಾಗ ಆ ಉಡುಗೊರೆ ಸ್ವೀಕರಿಸಿದರು.

ಮರುದಿನ ಕಲಾಂ ಮಾರುಕಟ್ಟೆಗೆ ತಮ್ಮ ಸಹಾಯಕನನ್ನು ಕಳಿಸಿ, ಗ್ರೈಂಡರ್‌ನ ನಿಖರವಾದ ಬೆಲೆ ಖಚಿತಪಡಿಸಿಕೊಂಡರು. ತಮ್ಮ ಸ್ವಂತ ಖಾತೆಯಿಂದ ಆ ಹಣವನ್ನು ಚೆಕ್ ಮೂಲಕ ಕಂಪನಿಗೆ ಕಳಿಸಿಕೊಟ್ಟರು. ಆದರೆ ಆ ಚೆಕ್ ಅನ್ನು ನಗದೀಕರಿಸದಿರಲು ಕಂಪನಿ ನಿರ್ಧರಿಸಿತ್ತು.

 ಸೌಭಾಗ್ಯ ವೆಟ್‌ಗ್ರೈಂಡರ್‌ ಸಂಸ್ಥೆಗೆ ಅಬ್ದುಲ್‌ ಕಲಾಂ ನೀಡಿದ್ದ ಚೆಕ್‌

ಆದರೆ ಕಲಾಂ ಅಷ್ಟಕ್ಕೇ ಬಿಡಲಿಲ್ಲ. ತನ್ನ ಖಾತೆಯಿಂದ ಹಣ ಕಡಿತವಾಗಿದೆಯೇ ಇಲ್ಲವೇ ಎಂದು ಪರಿಶೀಲಿಸುತ್ತಲೇ ಇದ್ದರು. ನಿಗದಿತ ವೇಳೆಯಲ್ಲಿ ಕಡಿತವಾಗದಿದ್ದಾಗ ಕಂಪನಿಗೆ ಫೋನ್‌ ಮಾಡಿ, ತಕ್ಷಣ ಚೆಕ್‌ ನಗದೀಕರಿಸಬೇಕು, ಇಲ್ಲದಿದ್ದರೆ ಗ್ರೈಂಡರ್‌ ವಾಪಾಸು ಕಳಿಸುವೆ ಎಂದು ಖಡಕ್ಕಾಗಿ ಹೇಳಿದರು. ಅನಂತರವೇ ಆದಿಕೇಶವನ್‌ ಆ ಚೆಕ್‌ನ ಫೋಟೋಕಾಪಿ ತೆಗೆದು ಅದನ್ನು ತನ್ನ ಕಚೇರಿಯಲ್ಲಿ ಪ್ರದರ್ಶಿಸಿದರು (ಚಿತ್ರದಲ್ಲಿರುವುದು ಅದೇ ಫೋಟೋ ಕಾಪಿ) ಚೆಕ್‌ ನಗದೀಕರಣವಾಗಿದ್ದು ತಿಳಿಯುತ್ತಿದ್ದಂತೆ ಕಲಾಂ ಆದಿಕೇಶವನ್‌ ಅವರ ಕಚೇರಿಗೆ ಫೋನ್‌ ಮಾಡಿ ಥ್ಯಾಂಕ್ಸ್‌ ಹೇಳಿದ್ದರಂತೆ!

ಸಾರ್ವಜನಿಕ ಕ್ಷೇತ್ರದಲ್ಲಿರುವ ಎಷ್ಟು ಮಂದಿ ಉನ್ನತ ಹುದ್ದೆಯ ವ್ಯಕ್ತಿಗಳು ಇಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಪರಿಪಾಲಿಸುತ್ತಾರೆ? ಇದೊಂದು ಮಿಲಿಯನ್‌ ಡಾಲರ್‌ ಪ್ರಶ್ನೆ!

30 ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಪದವಿಗಳು

ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಶ್ರೇಷ್ಠ ರಾಷ್ಟ್ರಪತಿ ಎಂಬ ಕಾರಣಕ್ಕೆ 30ಕ್ಕೂ ಹೆಚ್ಚು ದೇಶ-ವಿದೇಶಗಳ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ ಪದವಿಗಳು ಅವರನ್ನರಸಿ ಬಂದಿದ್ದವು. ಅವರಂತೂ ಯಾವುದಕ್ಕೂ ಅರ್ಜಿ ಹಾಕಿರಲಿಲ್ಲ. ತನ್ನ ಹೆಸರಿನ ಹಿಂದೆ ಅವರೆಂದೂ ʼಡಾ:ʼ ಎಂಬ ವಿಶೇಷಣವನ್ನು ಸೇರಿಸಿಕೊಂಡು ಸಂತಸಪಡಲಿಲ್ಲ. ಅವರೊಬ್ಬ ಸಾಮಾನ್ಯ ವ್ಯಕ್ತಿಯಂತೆಯೇ ಸರಳವಾಗಿ ಬದುಕಿದರು. ದೇಶ ಮೊದಲು, ಅನಂತರ ನಾವೆಲ್ಲ ಎಂಬುದು ಅವರ ಬದುಕಿನ ಸೂತ್ರವಾಗಿತ್ತು. ʼಮಾ ತುಝೇ ಸಲಾಂʼ ಎಂದು ಭಾರತಮಾತೆಯ ಅಡಿದಾವರೆಗಳಿಗೆ ತಮ್ಮ ಬುದ್ಧಿ, ಶಕ್ತಿ, ಸಾಮರ್ಥ್ಯ, ಪ್ರತಿಭೆ ಎಲ್ಲವನ್ನೂ ಕಲಾಂ ಅರ್ಪಿಸಿದ್ದರು. ಅವರ ಬದುಕೇ ಒಂದು ಸಂದೇಶ. ಒಂದು ಮೇಲ್ಪಂಕ್ತಿ. ನಾವದನ್ನು ಪ್ರಾಮಾಣಿಕವಾಗಿ ಅನುಸರಿಸಬೇಕಷ್ಟೆ.

ಬರಹ: ದು ಗು ಲಕ್ಷ್ಮಣ

Whats_app_banner

IMAGES

  1. APJ Abdul Kalam essay

    abdul kalam essay writing in kannada

  2. APJ Abdul Kalam Essay

    abdul kalam essay writing in kannada

  3. ಎಪಿಜೆ ಅಬ್ದುಲ್ ಕಲಾಂAPJ

    abdul kalam essay writing in kannada

  4. ಅಬ್ದುಲ್ ಕಲಾಂ ಅವರ ಬಗ್ಗೆ ಪ್ರಬಂಧ

    abdul kalam essay writing in kannada

  5. APJ Abdul Kalam essay|APJ Abdul Kalam essay writing in Kannada|APJ

    abdul kalam essay writing in kannada

  6. ಎಂ ಪಿ ಜೆ ಅಬ್ದುಲ್ ಕಲಾಂ

    abdul kalam essay writing in kannada

VIDEO

  1. ಎಪಿಜೆ ಅಬ್ದುಲ್ ಕಲಾಂ

  2. APJ Abdul Kalam essay

  3. APJ Abdul Kalam essay in Kannada

  4. ಎಪಿಜೆ ಅಬ್ದುಲ್ ಕಲಾಂ

  5. ಎಂ ಪಿ ಜೆ ಅಬ್ದುಲ್ ಕಲಾಂ

  6. ಎಪಿಜೆ ಅಬ್ದುಲ್ ಕಲಾಂAPJ

COMMENTS

  1. ಎ.ಪಿ.ಜೆ.ಅಬ್ದುಲ್ ಕಲಾಂ

    ಉಪನ್ಯಾಸಕ, ಲೇಖಕ, ವಿಜ್ಞಾನಿ, ರಾಷ್ಟ್ರಪತಿ. ಅಂತರಿಕ್ಷಯಾನ ಇಂಜಿನಿಯರ್. ಐಐಟಿ ಗುವಾಹಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ...

  2. ಅಬ್ದುಲ್ ಕಲಾಂ ಜೀವನ ಚರಿತ್ರೆ ಕನ್ನಡ

    #1. ಅಬ್ದುಲ್ ಕಲಾಂ ಜೀವನ ಚರಿತ್ರೆ ಕನ್ನಡ. ಶ್ರೇಷ್ಠ ವ್ಯಕ್ತಿಗಳು ಪ್ರತಿದಿನ ಹುಟ್ಟುವುದಿಲ್ಲ, ಶತಮಾನಕ್ಕೊಮ್ಮೆ ಒಬ್ಬರು ಹುಟ್ಟುತ್ತಾರೆ ಮತ್ತು ಮುಂಬರುವ …

  3. Apj Abdul Kalam Death Anniversary,Abdul Kalam ...

    Dr Apj Abdul Kalam Death Anniversary Know His Life His Legacy And His Inspiration

  4. ಎ ಪಿ ಜೆ ಅಬ್ದುಲ್ ಕಲಾಂ

    ಭಾರತ ದೇಶದ ೧೧ನೇ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ. ಇಂಬೆರ್ ೨೫ ಜುಲೈ ೨೦೦೨ ಡ್ದ್ ೨೫ ಜುಲೈ ೨೦೦೭ಗ್ ಮುಟ್ಟೊ ೫ ಒರ್ಸೊಗ್ ಭಾರತೊದ ರಾಷ್ಟ್ರಪತಿ ಆದಿತ್ತೆರ್. ಆರೆನ ಪೂರ್ತಿ ಪುದರ್ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಇಂಬೆರೆನ ಜನನ:೧೫ ಅಕ್ಟೋಬರ್ ೧೯೩೧. ಮರಣ:೨೭ ಜುಲೈ ೨೦೧೫. ಇಂಬೆರ್ ಪುಟ್ಟ್‌ದ್ …

  5. ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

    Dr. APJ Abdul Kalam Biography in Kannada. ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಭಾರತದ ವ್ಯಕ್ತಿಗಳಿಗೆ ಪ್ರೇರಣೆಯಾಗಿದ್ದಾರೆ.

  6. APJ Abdul Kalam essay writing in Kannada

    #ABDULKALAMESSAY #APJABDULKALAMKANNADA #APJABDULKALAMSPEECHin this video I explain about APJ Abdul Kalam essay writing in …

  7. ಎಪಿಜೆ ಅಬ್ದುಲ್ ಕಲಾಂ

    Essay Speech In Kannada. 248K subscribers. Subscribed. 1.2K. 106K views 2 years ago #APJAbdulKalamessay. #APJKannada #APJAbdulKalamessay …

  8. Abdul Kalam Birth Anniversary: ಮಾ ತುಝೆ ಸಲಾಂ …

    ಬರಹ: ದು ಗು ಲಕ್ಷ್ಮಣ. ನಾಡು ಕಂಡ ಧೀಮಂತ ನಾಯಕ ಅಬ್ದುಲ್‌ ಕಲಾಂರಿಗೆ ಅಕ್ಷರದ ನುಡಿನಮನ. ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು …